ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ

Karnataka State Temperance Board

About Us

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯನ್ನು ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರವು ರಚಿಸಿದೆ. ಮಂಡಳಿಯು 1976ರಿಂದ ಅಸ್ತಿತ್ವದಲ್ಲಿದ್ದು, 1981ರಲ್ಲಿ ವಾರ್ತಾ ಇಲಾಖೆಯಲ್ಲಿ ವಿಲೀನಗೊಂಡಿತ್ತು. ಪುನ: 1984ರಲ್ಲಿ ಪುನರ್ ರಚನೆಗೊಂಡು ಇಲ್ಲಿಯವರೆಗೂ ಕಾರ್ಯಪ್ರವೃತ್ತವಾಗಿದೆ.

ಮಂಡಳಿ ರಚನೆ:

ಸರ್ಕಾರಿ ಆದೇಶ ಸಂಖ್ಯೆಐಟಿ.ವೈ.78.ಪಿ.ಟಿ.ಇ.84 ದಿನಾಂಕ:22-10-1984

ಮೀನಾ ಕುಮಾರಿ ಈಶ್ವರ್ ಪಟಗಾರ್

ಕಾರ್ಯದರ್ಶಿ

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
ಬೆಂಗಳೂರು.

ಎಚ್.ಸಿ. ರುದ್ರಪ್ಪ

ಅಧ್ಯಕ್ಷರು

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
ಬೆಂಗಳೂರು.

ಮಂಡಳಿಯ ಧ್ಯೇಯೋದ್ದೇಶ

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯನ್ನು 1984ರಲ್ಲಿ ಪುನರ್ ರಚಿಸಿದ್ದು, ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಕಾರವು ನೀಡಿರುವ ಧ್ಯೇಯೋದ್ದೇಶದಂತೆ ಕಾರ್ಯ ಪ್ರವೃತ್ತವಾಗಿದೆ.

  •   ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿ ಪ್ರಚಾರ ಕಾರ್ಯಕ್ರಮ ಕೈಗೊಳ್ಳುವುದು.
  •   ಮದ್ಯ ವ್ಯಸನಿಗಳಿಗೆ ಮತ್ತು ಮಾಧಕ ವಸ್ತು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದು.
  •   ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸೂಕ್ತ ಪಾಠಗಳನ್ನು, ಪಾಥಮಿಕ ಮಾದ್ಯಮಿಕ ಶಾಲೆಗಳ ಮತ್ತು ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವದು.
  •   ಮದ್ಯ ವ್ಯಸನಿಗಳಿಗೆ ಪುನರ್ ವಸತಿ ಕಲ್ಪಸಲು ಕ್ರಮ ಕೈಗೊಳ್ಳುವುದು.
  •   ಮದ್ಯ ಮಾರಾಟ ಮತ್ತು ಸೇವನೆಗೆ ಹಾಗೂ ಶುಚಿತ್ವದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.
  •   ಮದ್ಯದಂಗಡಿಗಳನ್ನು ಧಾರ್ಮಿಕ ಸ್ಥಳದ ಸಮೀಪ, ವಿದ್ಯಾಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳು, ಕೊಳಚೆ ಪ್ರದೇಶಗಳು ಮತ್ತು ಪರಿಶಿಷ್ಠಪಂಗಡದವರು ವಾಸಿಸುವ ಸ್ಥಳದಲ್ಲಿ ತೆರೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವಂತೆ ಸರ್ಕಾರಕ್ಕೆ ಸಲಹೆ ಮಾಡುವುದು.
  •   ಮದ್ಯ ಮತ್ತು ಮಾದಕ ವಸತುಗಳ ದುಷ್ಪರಿಣಾಮಗಳನ್ನು ತಡೆಗಟ್ಟುವ ಬಗ್ಗೆ ಸಂಯಮ ಪ್ರಚಾರದ ಕೆಲಸಕ್ಕೆ ಸಂಬಂಧಿಸಿದಂತೆ ಸಕಾರಕ್ಕೆ ಸಲಹೆ ನೀಡುವುದು.
  •   ಮದ್ಯ ಮಾತ್ತು ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತರುವವರನ್ನು ಗುರುತಿಸಿ “ಸಂಯಮ” ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು.